ಶ್ರೀ ರಾಜರಾಜೇಶ್ವರಿ ದೇವಿ ನೆಲೆನಿಂತ ಸ್ಥಾನ.

ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಮಣಿಕಲ್ಲು ಕ್ಷೇತ್ರ, ಪುರಾಣ.. ಇತಿಹಾಸವನ್ನು ಹೊಂದಿರುವ ಕ್ಷೇತ್ರವಾಗಿ, ಸ್ರಷ್ಟಿ ಕಾಲದ ದಕ್ಷಯಜ್ಞದಲ್ಲಿ ದಾಕ್ಷಾಯಣಿಯು ತನ್ನನ್ನು ತಾನು ದಹಿಸಿಕೊಂಡ ಹೊತ್ತಲ್ಲಿ,, ಪರಮ ಶಿವನು ಕ್ರೋದಗೊಂಡು ಕಾಲಬೈರವನಾಗಿ ನೆಲೆನಿಂತ ಜಾಗವಾಗಿದೆ.. ಅಲ್ಲದೆ ಆ ಕಾಲಬೈರವನನ್ನು ಸಾಂತ್ವನಪಡಿಸಲು ದೇವಾನು ದೇವತೆಗಳೇ ಈ ತಾಣಕ್ಕೆ ಬಂದ ಲಕ್ಷಣವೂ ಕಂಡುಬದಿದೆ. ಶಿವನ ಪಾದದ ಗುರುತು ಇರುವ ಬ್ರಹತ್ ಶಿಲಾ ಬಂಡೆ… ಶಿವನ ಪಾದದಲ್ಲಿ ಸರ್ಪಗಳು ನಿಂತ ಸ್ಥಿತಿ… ಒಂದರ್ಥದಲ್ಲಿ ವಾಸುಕಿಯೇ ನಿಂತ ಸ್ಥಿತಿ ಅನ್ನ ಬೇಕು. ಗಂಗೆಯು ನೆಲೆಯಾದ ಸ್ಥಳವಾಗಿ.. ಇಲ್ಲಿಯ ತೀರ್ಥ ಮೊಂದೊಂದು ದಿನ ಪುಣ್ಯ ತೀರ್ಥವೇ ಆಗುವ ಲಕ್ಷಣಗಳು ಕಾಣುತಿವೆ.
ಅಲ್ಲದೆ ಕಲಿಯುಗದ ಆದಿಯಲ್ಲಿ ಮಾನಸದಿಂದ ಇಳಿದು ಬಂದ ಮೂಲ ಗುರು ತಪಸ್ಸು ಮಾಡಿ ತನ್ನ ಮನೋನ್ಮಯಿಯನ್ನು ಒಲಿಸಿ ಕೊಂಡ ಜಾಗವಾಗಿ ಕಂಡುಬoತು.
ಕದಂಬ ರಾಜಪರಂಪರೆಯ ಮಯೂರವರ್ಮರು ಆಳಿದ ಪ್ರದೇಶವಾಗಿ… ಬಿಲ್ಲಾಡಿಯಲ್ಲಿ ಕ್ಷತ್ರಿಯ ಪರಂಪರೆಯ ಅರಮನೆ ಇದ್ದು.. ರಾಜಪರಂಪರೆಯ ಉಪಾಸನ ಮೂರ್ತಿ ವ್ಯಾಘ್ರ ಚಾಮುಂಡೇಶ್ವರಿ ಈಗ ಒಂದು ಕಟ್ಟೆಯಲ್ಲಿ ರಾಜ ರಾಜೇಶ್ವರಿಯಾಗಿ ನಿಂತಿದ್ದಾಳೆ.ಮತ್ತೆ ಇತರ ರಾಜ ಪರಂಪರೆಗಳು ಈ ಪ್ರದೇಶ ಆಳಿದ ಲಕ್ಷಣಗಳು ಇವೆ.
ಒಟ್ಟಾರೆಯಾಗಿ ಈಗ ಈ ತಾಣದಲ್ಲಿ ಶಿವನೇ ಭೂತನಾಥೇಶ್ವರನಾಗಿ ಪ್ರಾಕೃತಿಕ ರೂಪದಲ್ಲಿ ನಿಂತು… ದೇವಾಲಯದ ಒಳಗೆ ದೇವಿ ಶಕ್ತಿ ಪ್ರಧಾನವಾಗಿ… ಅಬ್ಬಗ ಧಾರಗರು ರಾಜ ರಾಜೇಶ್ವರಿಯ ಸೇವಕಿಯಾರಾಗಿ ನಿಂತಿದ್ದಾರೆ.
ಉಳಿದಂತೆ ಎಲ್ಲಾ ಸಾನಿಧ್ಯಗಳು ಭಕ್ತರ ಪ್ರಾರ್ಥನೆ ಈಡೇರಿಸುವಲ್ಲಿ ನಿಂತಿದ್ದಾರೆ.

 

Leave a Reply

Your email address will not be published. Required fields are marked *

Related Posts

A.S.A Trophy 2025

ಫ್ರೆಂಡ್ಸ್ ಕ್ರಿಕೆಟರ್ಸ್ ನಾಯಕವಾಡಿ ಇವರ ಆಶ್ರಯದಲ್ಲಿ ಒಂಬತ್ತನೇ ಬಾರಿಗೆ ಹಗಲಿನ ಕ್ರಿಕೆಟ್ ಪಂದ್ಯಾಟ…